ಕೊನೆಗು ಯದುವೀರ್ ಒಡೆಯರ್ ಅವರಿಗೆ ಆಹ್ವಾನ!
ಮೋದಿ ಅವರ ಜೊತೆ ವೇದಿಕೆಯಲ್ಲಿ ಐವರಿಗೆ ಮಾತ್ರ ಅವಕಾಶ ಎಂದು ಚರ್ಚೆಯಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಜನಪ್ರತಿನಿಧಿಗಳು ಕೊನೆಗು ಎಚ್ಚೆತ್ತುಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಆಯುಷ್ ಇಲಾಖೆಯಿಂದ ಇದೀಗಾ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಒಡೆಯರ್ ಅವರಿಗು ಕೂಡ ಯೋಗ ದಿನಕ್ಕೆ ವೇದಿಕೆಯಲ್ಲಿ ಆಹ್ವಾನ ನೀಡಲಾಗಿದೆ. ಈ ವಿಚಾರವಾಗಿ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿ ನೀವೂ ಬರೋದೆ ಬೇಡ ಎಂದಿದ್ದರು. ಇದೀಗಾ ಇದ್ರಿಂದ ಎಚ್ಚೆತ್ತ ಜನಪ್ರತಿನಿಧಿಗಳು ಈ ಬಗ್ಗೆ ಮಾಹಿತಿ ನೀಡಿ ಗಣ್ಯರ ಪಟ್ಟಿಯಲ್ಲಿ ಯದುವೀರ್ ಒಡೆಯರ್ ಅವರ ಹೆಸರನ್ನ ಜೋಡಣೆ ಮಾಡಿದ್ದಾರೆ ಎನ್ನಲಾಗಿದೆ.