ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಅಭಿಮಾನಿ ಸಾವು
ಚಾಮರಾಜನಗರ: ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಪುನೀತ್ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮುನಿಯಪ್ಪ(29) ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ.

ಮುನಿಯಪ್ಪ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಪುನೀತ್ ಸಾವಿನ ವಿಷಯ ಕೇಳುತ್ತಲೇ ಕುಸಿದುಬಿದ್ದ ಮುನಿಯಪ್ಪ. ಆಸ್ಪತ್ರೆ ಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಕೊನೆಯುಸಿರು. ಪುನೀತ್ ಅವರ ಪ್ರತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಿದ್ದ ಮುನಿಯಪ್ಪ. ಆಗಾಗ್ಗೆ ಬೆಂಗಳೂರಿಗೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿದ್ದ ಅಭಿಮಾನಿ. ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ ಮುನಿಯಪ್ಪ. ನಾಳೆ ಮರೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.